ಕಸ್ತೂರಿ ಇಲಿ () ಇಲಿಯಂತೆಯೇ ಕಾಣುವ ಬಾಚಿಹಲ್ಲುಗಳುಳ್ಳ ಅರೆ ಜಲಚರ ಜೀವಿ. == ವೈಜ್ಞಾನಿಕ ವರ್ಗೀಕರಣ == ಕ್ರಿಸೆಟಿಡೀ ಕುಟುಂಬಕ್ಕೆ ಸೇರಿದ,ಅರ್ವಿಕೊಲಿನೀ ಉಪಕುಟುಂಬಕ್ಕೆ ಸೇರಿದೆ.ಒಂಡಾಟ್ರ ಪಂಗಡದ ಏಕೈಕ ಸದಸ್ಯ. == ಲಕ್ಷಣಗಳು == ಬಹುತೇಕ ಇಲಿಯಂತೆಯೇ ಕಾಣುತ್ತದೆ.ಕಪ್ಪು ಮಿಶ್ರಿತ ಕಂದು ಬಣ್ಣ.ಮೈತುಂಬ ಹೊಳೆಯುವ ಕೂದಲು.ಆಸನ ದ್ವಾರದ ಬಳಿ ಒಂದು ಜತೆ ಗ್ರಂಥಿಯಿದ್ದು ಇದರಿಂದ ಸುಗಂಧಯುಕ್ತ ವಾಸನೆ ಬರುತ್ತದೆ. ಇದರಿಂದಾಗಿ ಇದಕ್ಕೆ ಕಸ್ತೂರಿ ಇಲಿ ಎಂಬ ಹೆಸರು ಬಂದಿದೆ.ಒಂದು ವಯಸ್ಕ ಕಸ್ತೂರಿ ಇಲಿ ಸುಮಾರು ೧೬ರಿಂದ ೨೮ ಇಂಚು ಉದ್ದವಿದ್ದು ೦.೬ರಿಂದ ೨ ಕಿ.ಗ್ರಾಂ.ನಷ್ಟು ತೂಕವಿರುತ್ತದೆ. == ಭೌಗೋಳಿಕ ಹರಡುವಿಕೆ == ಮೂಲತಃ ಅಮೇರಿಕಾ ಖಂಡದ ವಾಸಿ. ಯುರೋಪು ಮತ್ತು ಏಷಿಯಾ ಖಂಡಗಳಿಗೂ ಈಗ ಪಸರಿಸಿದೆ. ಮುಖ್ಯವಾಗಿ ಚೌಗು ಪ್ರದೇಶಗಳಲ್ಲಿ,ನದಿ ಮತ್ತು ಕೆರೆಗಳ ಬಳಿ ವಾಸಿಸುತ್ತವೆ. == ಸ್ವಭಾವ == ಕಸ್ತೂರಿ ಇಲಿಗಳು ಗುಂಪುಗಳಲ್ಲಿ ಗೂಡುಕಟ್ಟಿ ವಾಸಿಸುತ್ತವೆ.ಸಾಮಾನ್ಯವಾಗಿ ಸಸ್ಯಾಹಾರಿಗಳು ಆದರೆ ಕೆಲವೊಮ್ಮೆ ಕೆಲವು ಜಲಚರಿಗಳನ್ನು ಭಕ್ಷಿಸುತ್ತವೆ. == ಬಾಹ್ಯ ಸಂಪರ್ಕಗಳು == " ". . 23 2006. – 2006-01-04 ವೇಬ್ಯಾಕ್ ಮೆಷಿನ್ ನಲ್ಲಿ. ' / == ಉಲ್ಲೇಖಗಳು ==